ಧಾರವಾಡಕ್ಕೆ ಆಗಮಿಸಿದ ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ಸಚಿವರಾದ ಶ್ರೀ ಪ್ರಹ್ಲಾದ ಜೋಷಿ ರವರು, ಇಂದು ಕೆ.ಸಿ.ಸಿ ಬ್ಯಾಂಕ್ ನ ಕಾರ್ಯಕಾರಿಣಿ ನಿಮಿತ್ತ ಆಗಮಿಸಿದ ಸಂದರ್ಭದಲ್ಲಿ,
ಧಾರವಾಡದ ನಗರದ ಪ್ರತಿಷ್ಠಿತ, 50 ವರ್ಷಗಳ ಹಳೆಯgದಾದ, ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಮಾಡುವಲ್ಲಿ ಹೆಸರಾದ ಬಾಂಬೆ ರೆಸ್ಟೋರೆಂಟ ಗೆ ಭೇಟಿ ನೀಡಿ, ತುಪ್ಪದ ದೋಸೆ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು, ಶಾಸಕರಾದ ಶ್ರೀ ಅಮೃತ ದೇಸಾಯಿ ರವರು, ಶ್ರೀ ಅರವಿಂದ ಬೆಲ್ಲದ ರವರು,
ಜಿಲ್ಲಾಧ್ಯಕ್ಷರಾದ ಶ್ರೀ ಸಂಜಯ ಕಪಟಕರ ರವರು, ಶ್ರೀ ತವನಪ್ಪ ಅಷ್ಟಗಿ ರವರು, ಶ್ರೀ ಟಿ.ಎಸ್. ಪಾಟೀಲ ರವರು, ಶ್ರೀ ವಿಜಯಾನಂದ ಶೆಟ್ಟಿ ರವರು, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಾಂಬೆ ರೆಸ್ಟೋರೆಂಟ ನ ಮಾಲೀಕರು,
ಹಿರಿಯರಾದ ಶ್ರೀ ರಾಮಕೃಷ್ಣ ಬೆಡಗಬೆಟ್ಟ ರವರು ಇತ್ತೀಚಿಗೆ ನಿಧನರಾದ ಹಿನ್ನೆಲೆಯಲ್ಲಿ, ಅವರ ಕುಟುಂಬಸ್ಥರಿಗೆ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಷಿ ಅವರು ಸಾಂತ್ವನ ಹೇಳಿದರು.