ದಿವ್ಯಾಂಗನಿಗೆ ಹಣ ಮರಳಿಸಿದ ನಿರ್ವಾಹಕ
ಧಾರವಾಡ: ಮಾಹಿತಿ ಕೊರತೆ ಕಾರಣದಿಂದ ವಿಶಿಷ್ಟಚೇನರ ಗಾಲಿ ಖುರ್ಚಿಗೆ ಲಗೇಜ್ ರೂಪದಲ್ಲಿ ಪಡೆದಿದ್ದ ೫೬ ರೂಪಾಯಿ, ಸಾರಿಗೆ ಇಲಾಖೆಯ ನಿರ್ವಾಹಕ ಮರಳಿಸಿದ ಅಪರೂಪದ ಘಟನೆ ಗುರುವಾರ ನಡೆದಿದೆ.
ತಾಲೂಕಿನ ಯತ್ತಿನಗುಡ್ಡದ ಮಹೇಶ ಗೂಳಪ್ಪನವರ ಎಂಬ ವಿಕಲಚೇತನ ವ್ಯಕ್ತಿ ಕೇರಳದಲ್ಲಿ ನಡೆಯುವÀ ರಾಷ್ಟçಮಟ್ಟದ ಪ್ಯಾರಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸಾರಿಗೆ ಇಲಾಖೆ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದರು.
ಅಲ್ಲದೇ, ಹುಟ್ಟು ದಿವ್ಯಾಂಗನಾದ ಮಹೇಶನಿಗೆ ಎರಡು ಕಾಲು ಸ್ವಾಧೀನ ಇಲ್ಲ. ಹೀಗಾಗಿ ಕೇರಳ ರಾಜ್ಯದಲ್ಲಿ ಓಡಾಡಲು ಮಹೇಶ ತನ್ನ ಗಾಲಿ ಖುರ್ಚಿ ಜೊತೆಗೆ ತೆಗೆದುಕೊಂಡು ಹೋಗಿದ್ದರು.
ಆದರೆ, ಹುಬ್ಬಳ್ಳಿಯಿಂದ ಕಾರವಾರ ಕಡೆಗೆ ತೆರಳುತ್ತಿದ್ದ ಸಾರಿಗೆ ಇಲಾಖೆಯ ಬಸ್ ನಿರ್ವಾಹಕ ಜಗದೀಶ, ಮಾಹಿತಿ ಕೊರತೆಯಿಂದ ದಿವ್ಯಾಂಗನ ಗಾಲಿ ಖುರ್ಚಿಗೆ ೫೬ ರೂಪಾಯಿ ಲಗೇಜ್ ಪಡೆದ್ದರು.
ಮಾನವೀಯತೆ ದೃಷ್ಟಿಯಿಂದ ದಿವ್ಯಾಂಗರ ತ್ರಿಚಕ್ರ ವಾಹನ ಮತ್ತು ಗಾಲಿ ಖುರ್ಚಿಗೆ ಲಗೇಜ್ ಪಡೆಯದಂತೆ ಆದೇಶವಿದೆ. ಆದಾಗ್ಯೂ ಜಗದೀಶ ಲಗೇಜ್ ಪಡೆದ ಬಗ್ಗೆ ಮಹೇಶ್ ಬೇಸರ ವ್ಯಕ್ತಪಡಿಸಿದ್ದರು.
ಅಲ್ಲದೇ, ಲಗೇಜ್ ಪಡೆಯದಂತೆ ಸಾರಿಗೆ ಇಲಾಖೆ ಮೇಲಾಧಿಕಾರಿಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಲು ಹೇಳಿದರೂ, ನಿರ್ವಾಹಕ ತನ್ನ ಮೊಂಡುತನ ಪ್ರದರ್ಶಿಸುವ ಮೂಲಕ ಹಣ ಪಡೆದಿದ್ದಾನೆ.
ಈ ವಿಷಯವನ್ನು ಮಹೇಶ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಧಾರವಾಡ ಜಿಲ್ಲಾ ಘಟಕದ ಗಮನಕ್ಕೆ ತಂದಿದ್ದಾರೆ. ಜಿಲ್ಲಾಧ್ಯಕ್ಷ ಕೇಶವ ತೆಲಗು ನಿರ್ವಾಹಕನಿಗೆ ತಿಳಿಹೇಳಿದರೂ ಕ್ಯಾರೆ ಎಂದಿಲ್ಲ.
ಕೊನೆಗೆ ಎನ್‌ಡಬ್ಲö್ಯ ಕೆಎಸ್‌ಆರ್‌ಟಿಸಿ ಹುಬ್ಬಳ್ಳಿ ವಿಭಾಗದ ಪಿಆರ್‌ಓ ಗಮನಕ್ಕೆ ತಂದು ಹಾಗೂ ಕಾರವಾರ ಸಾರಿಗೆ ಇಲಾಖೆ ಡಿಸಿ ಜೊತೆ ಮಾತನಾಡಿ, ಹಣ ಮರಳಿ ಕೊಡಿಸುವಲ್ಲಿ ಕೇಶವ ಯಶಸ್ವಿಯಾಗಿದ್ದಾರೆ.
--