ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ಧಿಷ್ಟ ಪ್ರತಿಭಟನೆ ಇಂದು 8 ನೇ ದಿನಕ್ಕೆ ಕಾಲಿಟ್ಟಿದೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ಧಿಷ್ಟ ಪ್ರತಿಭಟನೆ ಇಂದು 8 ನೇ ದಿನಕ್ಕೆ ಕಾಲಿಟ್ಟಿದೆ. ವೇತನ ಹೆಚ್ಚಳ, ಪದನಾಮ ಬದಲಾವಣೆ,

 ಸೇವಾಭದ್ರತೆ ಸೇರಿದಂತೆ ಹಲವು ಬೇಡಿಕೆ ಇಡೇರಿಸಬೇಕೆಂದು ಉಪನ್ಯಾಸಕರು  ಪಟ್ಟು ಹಿಡಿದಿದ್ದಾರೆ.  ಈ ನಡುವೆ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರೈತ ಸೇನಾ ಕರ್ನಾಟಕ ಅಧ್ಯಕ್ಷ ವಿರೇಶ ಸೊಬರದಮಠ, ಶಿಕ್ಷಣ ತಜ್ಞ ಮೋಹನ‌ ಸಿದ್ದಾಂತಿ, ನಿವೃತ ಉಪನ್ಯಾಸಕ ಡಾ. ಆರ್ ಎಸ್ ಮಿಟ್ಟಿಮನಿ, ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, 
ಸಿಂಡಿಕೇಟ್ ಸದಸ್ಯರಾದ ರವಿಕುಮಾರ ಮಾಳಿಗೇರ ಸೇರಿದಂತೆ ಹಲವು ಮುಖಂಡರು, ಸಂಘ ಸಂಸ್ಥೆಗಳು ಉಪನ್ಯಾಸಕರ ಬೇಡಿಕೆ ಇಡೇರಿಸುವಂತೆ ಆಗ್ರಹಿಸಿದ್ದಾರೆ. 
ಇನ್ನೊಂದೆಡೆ ಕುಲಪತಿಗಳ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಉಪನ್ಯಾಸಕರು ಹೇಳಿದ್ದು, ಮುಂದಾಗುವ ಅನಾಹುತಗಳಿಗೆ ಕುಲಪತಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರ, ಡಾ. ವೆಂಕನಗೌಡ ಪಾಟೀಲ, ಕಾರ್ಯದರ್ಶಿ ಚಂದ್ರಶೇಖರ ಪಾಟೀಲ, ಅಂಬರೀಷ ಸಿಂದಗಿ, ಡಾ. ಮಹೇಂದ್ರ‌ ಹರಿಹರ,  ಡಾ. ಮಲ್ಲಿಖಾರ್ಜುನ ಬ್ಯಾಲ್ಯಾಳ, ಡಾ. ನೀತಾ ಕರಿ, ಡಾ.‌ರಮಾ‌ ಗೂಂಡೂರಾವ, ಡಾ. ಪ್ರೇಮಾ ನಡಕಟ್ಟಿ, ಡಾ. ಶೀಲಾ ಭಂಡಾರಿ, ಡಾ. ಶೈಲಜಾ ಅಮರಶೆಟ್ಟಿ, ಡಾ.‌ಸುಜಾತಾ ಗೂರವ. ಡಾ. ಮಮತಾ ಶಿರಗಂಬಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال