ಹುಬ್ಬಳ್ಳಿ ಮಂಟೂರ ರಸ್ತೆಯಲ್ಲಿರುವ ಬಿಡನಾಳದ ಹತ್ತಿರ ಮಹಾನಗರ ಪಾಲಿಕೆಯ ವತಿಯಿಂದ ಖಾಯಂ
ಪೌರಕಾರ್ಮಿಕರಿಗಾಗಿ ನಿರ್ಮಾಣಗೊಳ್ಳುತ್ತಿರುವ 320 ಮನೆಗಳ ಕಾಮಗಾರಿಯ ವೀಕ್ಷಣೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪೌರಕಾರ್ಮಿಕರು ಅವರ ಮನೆಗಳ ಕಾಮಗಾರಿಯು ಇನ್ನೂ ಪೂರ್ಣವಾಗದ ಸಮಸ್ಯೆಗಳ ಬಗ್ಗೆ ಮಹಾಪೌರರ ಮುಂದೆ ತಿಳಿಸಿದಾಗ ಅಸಮಾಧಾನಗೊಂಡ ಮಹಾಪೌರರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ
ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡು, ಬರುವ ಅಕ್ಟೋಬರ್ ತಿಂಗಳೊಳಗಾಗಿ 25% ಕಾಮಗಾರಿಯನ್ನು ಪೂರ್ಣಗೊಳಿಸಿ, ಈ ವರ್ಷಾಂತ್ಯದಲ್ಲಿ ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸಿ, ಪೌರಕಾರ್ಮಿಕರಿಗೆ ಅನುಕೂಲಮಾಡಿಕೊಡಬೇಕು ಹಾಗೂ ಆಗಸ್ಟ್ 17 ರಂದು ಈ ವಿಷಯದ ಬಗ್ಗೆ ಪಾಲಿಕೆಯ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಶ್ರೀಮತಿ ಉಮಾ ಮುಕುಂದ ರವರು,
ಪಾಲಿಕೆಯ ಸಭಾನಾಯಕರಾದ ಶ್ರೀ ತಿಪ್ಪಣ್ಣ ಮಜ್ಜಿಗಿರವರು, ವಿರೋಧಪಕ್ಷದ ನಾಯಕರಾದ ಶ್ರೀ ದೋರಾಜ ಮನಕುಂಟ್ಲಾ ರವರು, ಪಾಲಿಕೆಯ ಸದಸ್ಯರಾದ ಶ್ರೀ ಶರಣಯ್ಯ ಹಿರೇಮಠ ರವರು, ಪಾಲಿಕೆಯ ಅಧಿಕಾರಿಗಳಾದ ಶ್ರೀ ವಿಜಯಕುಮಾರ ರವರು, ಶ್ರೀ ಶರೀಫ ರವರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.