*ಕರ್ನಾಟಕ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದ ವಿದ್ಯಾರ್ಥಿ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕ ಸಂಜಯಕುಮಾರ ಯಂಕನಗೌಡ ಬಿರಾದಾರ ರವರಿಗೆ “2021_ನೇ ಸಾಲಿನ ಯುತ್ ಐಕಾನ್ ರಾಷ್ಟ್ರ ಪ್ರಶಸ್ತಿಗೆ” ಆಯ್ಕೆ ಮಾಡಲಾಗಿದೆ.
ಹೌದು ಇದೆ ತಿಂಗಳು ಅಗಸ್ಟ್ 12 ರಂದು ಶ್ರೀಯುತರಿಗೆ “ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ನ್ಯಾಷನಲ್ ಯೂತ್ ಅವಾರ್ಡಿಸ್ ಆಫ್ ಫೆಡರೇಶನ್ ಹಾಗೂ ನ್ಯಾಷನಲ್ ಯೂತ್ ಫೋರಂ ಆಫ್ ಇಂಡಿಯಾ” ಇವೆರಡರ ಸಹಯೋಗದಲ್ಲಿ ಪ್ರತಿವರ್ಷ ಯುವ ಸಮಾಜ ಸೇವಕರಿಗೆ ಕೊಡುವ ಪ್ರತಿಷ್ಠಿತ ಪ್ರಶಸ್ತಿಯಾದ “2021_ನೇ ಸಾಲಿನ ನ್ಯಾಷನಲ್ ಯೂತ್ ಐಕಾನ್ ರಾಷ್ಟ್ರ ಪ್ರಶಸ್ತಿಗೆ ಕರ್ನಾಟಕದಿಂದ ಇವರ ಯುವ ಸಮಾಜ ಸೇವೆ ಹಾಗೂ ಎನ್.ಎಸ್.ಎಸ್ ಕಾರ್ಯವೈಖರಿಯನ್ನು ಮೆಚ್ಚಿ ಸಂಜಯಕುಮಾರ ಯಂಕನಗೌಡ ಬಿರಾದಾರವರನ್ನು ಆಯ್ಕೆ ಮಾಡಿರುವುದು ನಮ್ಮ ಕರ್ನಾಟಕಕಕ್ಕೂ ಹಾಗೂ ಧಾರವಾಡ ಜಿಲ್ಲೆಗೂ ಹೆಮ್ಮೆಯ ವಿಷಯವಾಗಿದೆ. ಶ್ರೀಯುತರಿಗೆ ಇದೆ ಅಗಸ್ಟ್ 12 ರಂದು ದೆಹಲಿಯ ಮಹಾರಾಷ್ಟ್ರ ಸಧನದಲ್ಲಿ ಕೇಂದ್ರ ಸಚಿವರಾದ ಅನುರಾಗ ಠಾಕೂರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರು ಭಾರತ ಸರ್ಕಾರ ಇವರು ಹಾಗೂ ಇನ್ನಿತರ ಗಣ್ಯರು ಸೇರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಿರುವರೆಂದು ರಾಷ್ಟ್ರೀಯ ಯೂತ್ ಫೋರಂನ ಅಧ್ಯಕ್ಷರಾದ ಪುನೀತ್ ಪ್ರಧಾನ ಅವರು ತಿಳಿಸಿದ್ದಾರೆ. ಸನ್ಮಾನ್ಯರಿಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ಬಿ. ಗುಡಸಿ ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಎಂ.ರತ್ನಾಕರ ಮತ್ತು ಶಿಕ್ಷಕ ಸಿಬ್ಬಂದಿ ವರ್ಗದವರು , ಸ್ನೇಹಿತರೆಲ್ಲರೂ ಅಭಿನಂದಿಸಿದ್ದಾರೆ.*
YouTube channel STAR 74 NEWS SUBSCRIBE & LIKE support .