*ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಲ್ಡಿಂಗ್ ಕಟ್ಟಲು ಅನುಮತಿ ಸಿಗುತ್ತಿಲ್ಲ*
ಕಳೆದ ಮೂರ್ನಾಲ್ಕು ವಾರಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಲ್ಡಿಂಗ್ ಕಟ್ಟಲು ಅನುಮತಿ ಸಿಕ್ತಾ ಇಲ್ಲ. ಆನ್ಲೈನ್ ಮುಖಾಂತರ ಬಿಲ್ಡಿಂಗ್ ಕಟ್ಟಲು ಅರ್ಜಿಗಳನ್ನು ಅಪ್ಲೋಡ್ ಮಾಡುವ ಸಾಫ್ಟ್ವೇರ್ ನಿರ್ಮಾಣ-2, ಮೂರು-ನಾಲ್ಕು ವಾರಗಳಿಂದ ಬಂದ ಆಗಿದೆ, ಕೆಲಸ ಮಾಡುತ್ತಿಲ್ಲ, ಹೀಗಾಗಿ ಕಟ್ಟಡ ಕಟ್ಟುವ ಮಾಲೀಕರು ಹಾಗೂ ಇಂಜಿನಿಯರ್ಗಳು ಕಾರ್ಪೊರೇಷನ್ನಿಗೆ ಅಲೆದಾಡುವಂತಾಗಿದೆ.
ಈ ಸಮಸ್ಯೆಯನ್ನು ಬೇಗನೆ ಬಗೆಹರಿಸಲು ಅಸೋಶಿಯೇಶನ್ ಅಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಲೋಕಲ್ ಸೆಂಟರ್ ಧಾರವಾಡದ ವತಿಯಿಂದ ಮೇಯರ ಈರೇಶ್ ಅಂಚಟಗೇರಿ, ಡೆಪುಟಿ ಮೇಯರ ಶ್ರೀಮತಿ ಉಮಾ ಮುಕುಂದ ಹಾಗೂ ಹುಬ್ಬಳ್ಳಿ-ಧಾರವಾಡ ಕಾರ್ಪೊರೇಷನ್ ಕಮಿಷನರ ಬಿ ಗೋಪಾಲಕೃಷ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸಿಸಿಇ ಲೋಕಲ್ ಸೆಂಟರ ಧಾರವಾಡದ ಅಧ್ಯಕ್ಷರಾದ ಸುನಿಲ ಬಾಗೇವಾಡಿ, ಸೆಕ್ರೆಟರಿ ಅರುಣಕುಮಾರ್ ಶೀಲವಂತ ಹಾಗೂ ಇಂಜಿನಿಯರಗಳಾದ,
ಸಿದ್ದನಗೌಡ ಪಾಟೀಲ್,ಕಬೀರ್ ನದಾಫ, ಸಂಜಯ ಕಬ್ಬೂರ,ವಿಜಯೇಂದ್ರಗೌಡ ಪಾಟೀಲ, ಪವನ ಬೆಟಗೇರಿ, ಸಂಜಯ ಲೋಂಡೆ,ಸುಮಿತ ಸುಣಗಾರ, ಜುಬೇರ್ ಅಬ್ಬಿಹಾಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.