ಶಿಕ್ಷಕ ಶಿಕ್ಷಕಿಯರಿಗೆ ಉಚಿತ ಪ್ರವೇಶಸಾವಿತ್ರಿಬಾಯಿ‌ ಫುಲೆ' ಚಲನಚಿತ್ರ ಪ್ರದರ್ಶನ

ಶಿಕ್ಷಕ ಶಿಕ್ಷಕಿಯರಿಗೆ ಉಚಿತ ಪ್ರವೇಶ
ಸಾವಿತ್ರಿಬಾಯಿ‌ ಫುಲೆ' ಚಲನಚಿತ್ರ ಪ್ರದರ್ಶನ 
  ಧಾರವಾಡ:-- ಶ್ರೀ ಅಮೋಘ ಸಿದ್ದೇಶ್ವರ ಕ್ರಿಯೇಷನ್ಸ್  ಹಾಗೂ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ಇವುಗಳ ಸಹಯೋಗದಲ್ಲಿ ನಾಳೆ ದಿ.
:26 ರಂದು ಬೆಳಿಗ್ಗೆ 8:30 ಗಂಟೆಗೆ ಶ್ರೀನಿವಾಸ ಟಾಕೀಸ್ ನಲ್ಲಿ  ಸಾವಿತ್ರಿಬಾಯಿ‌ ಫುಲೆ' ಚಲನಚಿತ್ರ ಪ್ರದರ್ಶನ ಆರಂಭವಾಯಿತು
    ಶಾಸಕರಾದ ಅರವಿಂದ ಬೆಲ್ಲದ  ಚಲನಚಿತ್ರ ಬಿಡುಗಡೆ ಕಾರ್ಯಕ್ರಮ ದಲ್ಲಿ ಪಾಲ್ಗೊಗೋಂಡಿದ್ದರು.
     ಈ ಚಿತ್ರವು ಮಾತೆ ಸಾವಿತ್ರಿ ಬಾಯಿ ಫುಲೆ ರವರ ಜೀವನ ಚರಿತ್ರೆಯನ್ನ ಆಧರಿಸಿದ್ದಾಗಿದ್ದು ಎಲ್ಲಾ ನಾಡಿನ ಹೆಣ್ಣುಮಕ್ಕಳು ಕಡ್ಡಾಯವಾಗಿ ನೋಡಲೇಬೇಕಾದ ಚಲನಚಿತ್ರವಾಗಿದೆ
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ‌ಹಾಗೂ ರಾಜ್ಯಪ್ರಶಸ್ತಿ ಪಡೆದಿರುವವಂತ ಈ ಚಿತ್ರ ಇದಾಗಿದ್ದು,  ಹಿರಿಯ ಪತ್ರಕರ್ತರು. ಸಾಹಿತಿಗಳಾದ ಡಾ.ಸರಜೂ ಕಾಟ್ಕರ್ ರವರ ಕಾದ0ಬರಿ ಆಧರಿಸಿ ಚಿತ್ರೀಕರಿಸಲಾಗಿದೆ. ,ನಿರ್ಮಾಪಕರಾದ  ಬಸವರಾಜ  ಭೂತಾಳಿ ರವರು ನಿರ್ಮಿಸಿರುವ ಈ ಚಲನಚಿತ್ರವನ್ನು   ವಿಶಾಲ್ ರಾಜ್ ರವರು ನಿರ್ದೇಶಿಸಿದ್ದಾರೆ
       ಚಿತ್ರದಲ್ಲಿ ಮಾತೆ ಸಾವಿತ್ರಿ ಬಾಯಿ ಫುಲೆ ರವರ ಪಾತ್ರವನ್ನು ರಾಷ್ಟ್ರಪ್ರಶಸ್ತಿ ವಿಜೇತರಾದ ಹೆಸರಾಂತ ನಟಿ ತಾರಾ ಅನುರಾಧ ರವರು ನಟಿಸಿದ್ದಾರೆ ಜನಪ್ರಿಯ್ ನಟರಾದ  ಸುಚೇಂದ್ರ ಪ್ರಸಾದ್ ಅವರು ಜ್ಯೋತಿಬಾ ಪಾತ್ರದಲ್ಲಿ ನಟಿಸಿದ್ದಾರೆ.  
      ದೇಶದ ಪ್ರಥಮ‌ ಮಹಿಳಾ ಶಿಕ್ಷಕಿಯಾದ ಮಾತೆ ಸಾವಿತ್ರಿಬಾಯಿ ಫುಲೆ ರವರ ಜೀವನ ಚರಿತ್ರೆ ಎಲ್ಲರು ಅರಿಯಬೇಕೆಂಬ ಆಶಯದಲ್ಲಿ  ಇಂತಹ ಚಿತ್ರವನ್ನು ಧಾರವಾಡ ಶಹರದ ಸಮಸ್ತ ಶಿಕ್ಷಕ ಶಿಕ್ಷಕಿಯರು,ಶಾಲಾ ಮಕ್ಕಳು ಎಲ್ಲರೂ ವೀಕ್ಷಿಸುವಂತೆ  ಶಿಕ್ಷಣ ಇಲಾಖೆಯು ಸಹಾ ನಿರ್ದೇಶನ ಮಾಡಿ ಪ್ರೋತ್ಸಾಹ ನೀಡಿರುವುದು ಹೆಮ್ಮೆಯ ವಿಷಯವಾಗಿದೆ.
      ಶಾಸಕರರಾದ ಅರವಿಂದ ಬೆಲ್ಲದ ರವರು ಸಹಾ ಧಾರವಾಡ ಶಹರದ  ಎಲ್ಲಾ ಸರಕಾರಿ. ಅನುದಾನಿತ. ಅನುದಾನ ರಹಿತ. ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕ ಶಿಕ್ಷಕಿಯರಿಗೆ 'ಸಾವಿತ್ರಿಬಾಯಿ ಫುಲೆ' ಚಲನಚಿತ್ರವನ್ನು ವೀಕ್ಷಿಸಲು ಉಚಿತವಾಗಿ ಟಿಕೆಟ್ ಒದಗಿಸಿದ್ದಾರೆ.ಅದಕ್ಕಾಗಿ ತಗುಲುವ ಸಂಪೂರ್ಣ ವೆಚ್ಚವನ್ನು ಭರಿಸಿದ್ದಾರೆ
     ಚಿತ್ರಮಂದಿರದಲ್ಲಿ ಸಿನಿಮಾ ತಪ್ಪದೇ ವೀಕ್ಷಿಸಿ,ಮಾತೆ ರವರ ಸಂಪೂರ್ಣ ಜೀವನ ಚರಿತ್ರೆ ಆದರ್ಶಗಳನ್ನ ತಿಳಿದು ನಡೆಯಬೇಕಾಗಿದೆ ಅಲ್ಲದೇ,ಪ್ರತೀ ಹೆಣ್ಣುಮಕ್ಕಳು ಕಡ್ಡಾಯವಾಗಿ ವೀಕ್ಷಣೆ ಮಾಡಬೇಕಾದ ಚಲನಚಿತ್ರ ಇದಾಗಿದ್ದು ಎಲ್ಲರೂ  ಸಿನಿಮಾ ನೋಡುವ ಮೂಲಕ ಮಾತೆ ಸಾವಿತ್ರಿಬಾಯಿ ಫುಲೆರವರಿಗೆ ಗೌರವ ಸಲ್ಲಿಸಿ ಎಂದು ಕೂಡ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್ ಮುಳ್ಳೂರ ಮನವಿ ಮಾಡಿದ್ದಾರೆ
    ಈ ಚಲನಚಿತ್ರವು ದಿನಾಂಕ ೨೬ ರಂದು ಬೆಳಿಗ್ಗೆ 8:30  ಗಂಟೆಗೆ   ಶಾಸಕರು ದೀಪ ಬೆಳಗಿಸಿ, ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವ ಮೂಲಕ ಪ್ರದರ್ಶನಕ್ಕೆ ಚಾಲನೆ ಮಾಡಲಿದ್ದಾರೆ. ಧಾರವಾಡ ಶಹರದ ಎಲ್ಲಾ ಪ್ರತೀ ಶಾಲೆಯ ೫೦% ಶಿಕ್ಷಕರು ಮೊದಲ ದಿನವೇ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ ಹಾಗೂ ಇನ್ನುಳಿದ  ೫೦% ಶಿಕ್ಷಕರು ದಿನಾಂಕ ೨೭ ರಂದು ಚಲನಚಿತ್ರವನ್ನು ವೀಕ್ಷಿಸಲು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ಕೋರಿದ್ದಾರೆ.
ನವೀನ ಹಳೆಯದು

نموذج الاتصال