ಪ್ಲಾಸ್ಟಿಕ್ ನಿಷೇಧ: ಸಾಮಾಜಿಕ ನ್ಯಾಯ ಕಾಪಾಡಲು-- ಕಾಂಗ್ರೆಸ್ ಆಗ್ರಹ

 ಪ್ಲಾಸ್ಟಿಕ್   ನಿಷೇಧ: ಸಾಮಾಜಿಕ ನ್ಯಾಯ ಕಾಪಾಡಲು-- ಕಾಂಗ್ರೆಸ್ ಆಗ್ರಹ

       ಧಾರವಾಡ:-- ಪ್ಲಾಸ್ಟಿಕ್   ಬ್ಯಾಗ್‌ಗಳು ಹಾಗೂ ದೈನಂದಿನ ಬಳಕೆಯಲ್ಲಿರುವ ಇತರೆ ಪ್ಲಾಸ್ಟಿಕ್ ವಸ್ತುಗಳು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರಕ್ಕೆ ಹಾನಿಯನ್ನು ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಈ ಎಲ್ಲ ಮಾದರಿಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿರುವದು ಸರಿಯಾದದ್ದೆ ಆದರೆ ಇದರ ಮೇಲೆಯೇ ಜೀವನ ನಡೆಸುವವರ ಬಡವರ, ಆರ್ಥಿಕ ದುರ್ಬಲವಾದ ಸಮಾಜದ ಹಿತಕಾಯುವಲ್ಲಿ ಸರ್ಕಾರ ವಿಫಲವಾಗಿದ್ದು ನಿಟ್ಟಿನಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತೆವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ  ಸದಸ್ಯರಾದ ರಾಬರ್ಟ್‌ ದದ್ದಾಪುರಿ ಹೇಳಿದರು.



      ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಸಮಾಜದ ಸ್ವಾಸ್ಥ್ಯದ ಸಲುವಾಗಿ ಮತ್ತು ಬಡವರ ದಿನನಿತ್ಯ ಚಿಕ್ಕ - ಪುಟ್ಟ ಪ್ಲಾಸ್ಟಿಕ್ ವಸ್ತುಗಳನ್ನು / ಪ್ಲಾಸ್ಟಿಕ್ ಚಿಕ್ಕ ಆಟಿಕೆಗಳನ್ನು / ಪ್ಲಾಸ್ಟಿಕ್ ಮಾಲೆಗಳ ವ್ಯಾಪಾರದಿಂದಲೇ ಜೀವನವನ್ನು ಸಾಗಿಸುವ ಅತಿ ಸಣ್ಣ ವ್ಯಾಪಾರಸ್ಥರ ಜೀವನೋಪಾಯದ ಭದ್ರತೆಯ ಸಲುವಾಗಿ ನೀಡುತ್ತಿರುವ ದೂರು, ತಕರಾರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಸರ್ಕಾಕ್ಕೆ ನೀಡುತ್ತೆವೆ ಎಂದರು.


    ಪ್ಲಾಸ್ಟಿಕ್ ಕ್ಯಾರಿಬ್ಯಾಗ್ , ಪ್ಲಾಸ್ಟಿಕ್ ಭಿತ್ತಿಪತ್ರ , ಪ್ಲಾಸ್ಟಿಕ್ ತೋರಣ , ಪ್ಲೆಕ್ಸ್ , ಬಾವುಟ , ಪ್ಲಾಸ್ಟಿಕ್ ತಟ್ಟೆ , ಪ್ಲಾಸ್ಟಿಕ್ ಲೋಟ , ಪ್ಲಾಸ್ಟಿಕ್ ಚಮಚಗಳು , ಕಿಂಗ್ ಫಿಲ್ಡ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆಗಳು ಮತ್ತು ಥರ್ಮೋಕೋಲನಿಂದ ತಯಾರಾದ ವಸ್ತುಗಳ ವ್ಯಾಪಕ ಬಳಕೆಯಿಂದಾಗಿ ಪರಿಸರಕ್ಕೆ ಹಾನಿ ಹಾಗೂ ಮಾನವ ಮತ್ತಿತರ ಪ್ರಾಣಿಗಳ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ . ಇವುಗಳನ್ನು ಸರಕಾರವು ಕಾನೂನುಬದ್ಧವಾಗಿ ಆದೇಶವನ್ನು ಮಾಡಿ ನಿಷೇಧಿಸಿದೆ . ಆದರೆ ಇದಕ್ಕೆ ಪರ್ಯಾಯವಾಗಿ ಸರಕಾರವು ಒದಗಿಸುವ ವಸ್ತುಗಳನ್ನು / ವ್ಯವಸ್ಥೆಯನ್ನು ಕಡು ಬಡವರಿಗೆ / ಬಡ ವ್ಯಾಪಾರಸ್ಥರಿಗೆ / ಇವುಗಳನ್ನು ಮಾರಿ ಬದುಕು ಕಟ್ಟಿಕೊಂಡವರಿಗೆ ತಕ್ಷಣವೇ ಪೂರೈಸಬೇಕು ಎಂದರು.

     ಸರಕಾರವು ನಿಷೇಧದ ಬಗ್ಗೆ ತೋರಿರುವ ಕಾಳಜಿಯನ್ನು ನಿಷೇಧಿಸಿದ ವಸ್ತುಗಳಿಗೆ ಪರ್ಯಾಯವಾಗಿ ಒದಗಿಸಬೇಕಾದ ವಸ್ತುಗಳನ್ನು ತಕ್ಷಣ ಒದಗಿಸುವ ಬಗ್ಗೆಯೂ ಅಷ್ಟೇ ಕಾಳಜಿಯನ್ನು ಕ್ರಮವನ್ನು ತೆಗೆದುಕೊಳ್ಳಬೇಕು . ಪ್ಲೆಕ್ಸ್‌ಗಳನ್ನು ನಿಷೇಧಿಸುವುದರಿಂದ ಪ್ಲೆಕ್ಸ್ ದಂಧೆಯಲ್ಲಿ ಈಗಾಗಲೇ ಲಕ್ಷಾಂತರ ರೂ,ಗಳನ್ನು ಬಂಡವಾಳ ಹಾಕಿರುವ ವ್ಯಾಪಾರಸ್ಥರಿಗೆ ಸರಕಾರವು ನೀಡುತ್ತಿರುವ ಪರಿಹಾರದ ಬಗ್ಗೆ ಎಲ್ಲಿಯೂ ರಾಜ್ಯಪತ್ರದಲ್ಲಿ ಉಲ್ಲೇಖಿಸಿಲ್ಲಾ , ಈ ನಿಷೇಧದಿಂದಾಗಿ ಕೋಟ್ಯಾಂತರ ಗುಡಿ ಕೈಗಾರಿಕೆಗಳು ಮತ್ತು ಇವುಗಳನ್ನು ಮಾರಿಯೇ ಇಲ್ಲಿಯವರೆಗೆ ಜೀವನವನ್ನು ಸಾಗಿಸುತ್ತಿರುವ ಬಡವರ ಭವಿಷ್ಯದ ಬಗ್ಗೆ ಇವುಗಳನ್ನು ನಿಷೇಧಿಸುವ ಪೂರ್ವದಲ್ಲಿ  ಸರಕಾರವು ತೀವ್ರವಾಗಿ ಗಮನಹರಿಸ ಬೇಕಿರುವುದು ಅವಶ್ಯವಾಗಿದೆ ಮತ್ತು ನ್ಯಾಯಬದ್ಧವಾಗಿದೆ . ಡಾ . ಬಾಬಾಸಾಹೇಬ ಅಂಬೇಡಕರರು ಸಂವಿಧಾನದಲ್ಲಿ ಪ್ರತಿಪಾದಿಸಿದ ಸಾಮಾಜಿಕ ನ್ಯಾಯವನ್ನು ಇಲ್ಲಿ ಸರಕಾರವು ಸಾರಾಸಗಟವಾಗಿ ತಳ್ಳಿ ಹಾಕಿದಂತಾಗಿದೆ ಎಂದರು.


      ವಿಶೇಷ ಆರ್ಥಿಕ ವಲಯ ಮತ್ತು ರಫ್ತು ಉದ್ದೇಶಿತ ಘಟಕಗಳಲ್ಲಿ ಸ್ಥಾಪಿತವಾದ ಪ್ಲಾಸ್ಟಿಕ್‌ ಉದ್ಯಮದಲ್ಲಿ ರಫ್ತು ಮಾಡುವ ಉದ್ದೇಶಕ್ಕೆಂದು ಪ್ರತ್ಯೇಕವಾಗಿ ಹಾಗೂ ರಫ್ತು , ಆರ್ಡರ ಮೇರೆಗೆ ಉತ್ಪಾದಿಸುವ ಪ್ಲಾಸ್ಟಿಕ್ ವಸ್ತುಗಳಿಗೆ ವಿನಾಯಿತಿಯನ್ನು ನೀಡಲಾಗಿದೆ . ಈ ತಾವು ವಿನಾಯಿತಿ ನೀಡಲಾದ ಈ ಪ್ಲಾಸ್ಟಿಕ್ ವಸ್ತುಗಳು ಸಮಾಜದಲ್ಲಿ ದುರುಪಯೋಗವಾಗುವುದಿಲ್ಲ ಎಂಬ ಬಗ್ಗೆ ಘನ ಸರಕಾರಕ್ಕೆ ಖಚಿತತೆ ಇದೆಯೇ ? ಸಾಮಗ್ರಿಗಳನ್ನು ಬಳಸುವುದಕ್ಕೆ ಮೊದಲು ಉತ್ಪಾದನಾ / ಸಂಸ್ಕರಣ ಘಟಕಗಳಲ್ಲಿ ಪ್ಯಾಕ ಮಾಡಿ ಸೀಲ್ ಮಾಡಲು ಬಳಸುವ ಹಾಗೂ ಸಾಮಗ್ರಿಗಳ ಪ್ಯಾಕೆಜಿಂಗ ಮಾಡುವ ಸಂದರ್ಭದಲ್ಲಿ ಅವಿಭಾಜ್ಯವಾಗಿ ಉಪಯೋಗಿಸುವ ಪ್ಲಾಸ್ಟಿಕ್ ಬ್ಯಾಗುಗಳಿಗೂ ಸಹ ವಿನಾಯಿತಿಯನ್ನು ನೀಡಿದ್ದೀರಿ , ಸದರಿ ವಿನಾಯಿತಿ ನೀಡಲಾದ ಪ್ಲಾಸ್ಟಿಕ್ ವಸ್ತುಗಳು ಸಮಾಜದ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ / ಪರಿಸರ / ಮಾನವ / ಪ್ರಾಣಿಗಳ ಸ್ವಾಸ್ಥ್ಯಕ್ಕೆ ಧಕ್ಕೆಯಾಗುತ್ತದೆ . ಎಂಬುದರ ಬಗ್ಗೆಯೂ ಘನಸರಕಾರವು ಈ ಕೂಡಲೇ ಯೋಚಿಸಿ ಕ್ರಮವನ್ನು ತೆಗೆದುಕೊಳ್ಳಬೇಕು ಎಂದರು.

 ಸರಕಾರಿ ಇಲಾಖೆಗಳಿಂದ ಅಥವಾ ಇತರೆ ಸಂಬಂಧಪಟ್ಟ ಸಂಸ್ಥೆಗಳಿಂದ ಸ್ವೀಕೃತವಾದ ಆರ್ಡರಿಗೆ ಎದುರಾಗಿ ಆರಣ್ಯ ಮತ್ತು ತೋಟಗಾರಿಕೆ ನರ್ಸರಿಗಳಲ್ಲಿ ಬಳಸುವ ಪ್ಲಾಸ್ಟಿಕ್ ಚೀಲಗಳು ಹಾಗೂ ಪ್ಲಾಸ್ಟಿಕ್ ಹಾಳೆಗಳಿಗೆ ವಿನಾಯಿತಿಯನ್ನು ನೀಡಿದ್ದೀರಿ . ಈ ವಿನಾಯಿತಿಯನ್ನು ನೀಡಲಾದ ಪ್ಲಾಸ್ಟಿಕ್ ಚೀಲಗಳು ಮತ್ತು ಪ್ಲಾಸ್ಟಿಕ್ ಹಾಳೆಗಳು , ಅಲ್ಲವಾದಿ ಹಗೂ ದೀರ್ಘಾವಧಿಯಲ್ಲಿ ಪರಿಸರಕ್ಕೆ ಹಾನಿಯನ್ನು ಮತ್ತು ಆರೋಗ್ಯಕ್ಕೆ ಅಪಾಯದ ದುರುಪಯೋಗ ಕುರಿತು ಸರಕಾರವು ಗಮನಹರಿಸಿರುವುದಿಲ್ಲಾ , ಹಾಲು ಮತ್ತು ಹಾಲು ಉತ್ಪನ್ನಗಳ ಪ್ಯಾಕಿಂಗ್ ಬಳಸುವ ಪ್ಲಾಸ್ಟಿಗೆ ವಿನಾಯಿತಿಯನ್ನು ನೀಡಿರುತ್ತೀರಿ ಸಾರ್ವಜನಿಕವಾಗಿ ಬಳಕೆಯಾದ ನಂತರ ಸದರಿ ಪ್ಲಾಸ್ಟಿಕ್ ದುರ್ಬಳಕೆ ಆಗುವದಿಲ್ಲಾ ಎಂಬ ಖಚಿತತೆ ಸರಕಾರಕ್ಕೆ ಇದ್ದಂತಿಲ್ಲಾ ಮತ್ತು ಅಲ್ಪಾವಧಿ ಹಾಗೂ ದೀರ್ಘಾವದಲ್ಲಿ ಇವುಗಳಿಂದ ಪರಿಸರಕ್ಕೆ ಹಾನಿಯನ್ನು ಹಾಗೂ ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುವ ಬಗ್ಗೆ ಸರಕಾರವು ತೀವ್ರವಾಗಿ ಕ್ರಮವನ್ನು ತೆಗೆದುಕೊಳ್ಳಬೇಕು . 


ಉಲ್ಲೇಖಿಸಲಾದ ಕರ್ನಾಟಕ ರಾಜ್ಯ ಪತ್ರ ಹಾಗೂ ತಿದ್ದುಪಡಿಗೊಂಡ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶಗಳನ್ನು ಪರಾಮರ್ಶಿಸಲಾಗಿ ಸದರಿ ಆದೇಶಗಳಿಂದ ಸಮಾಜದಲ್ಲಿಯ ಕೋಟ್ಯಾಂತರ ಗುಡಿಕೈಗಾರಿಕೆಗಳು ಮತ್ತು ಬಡವರು / ಮಹಿಳೆಯರು / ರೈತರು , ಅತಿಸಣ್ಣ ವ್ಯಾಪಾರಸ್ಥರ ಮೇಲೆಯೇ


  ಸರಕಾರವು ಈ ಕೂಡಲೇ  ಎಲ್ಲ ಪ್ರಕಾರದ ಪ್ಲಾಸ್ಟಿಕ್ ಕುಡಿಯುವ ನೀರಿನ ಬಾಟಲಿಗಳನ್ನು ನಿಷೇಧಿಸಬೇಕು .  ಕುಡಿಯಲು ಸಾರ್ವಜನಿಕರಿಗೆ ತಂಪು ಪಾನೀಯಗಳನ್ನು ಪೂರೈಸುವ ಎಲ್ಲ ಪ್ಲಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಬೇಕು, ದವಸ ಧಾನ್ಯಗಳನ್ನು ಶೇಖರಿಸುವ ಮತ್ತು ಮಾರುವ ಎಲ್ಲಾ ಪ್ಲಾಸ್ಟಿಕ ಚೀಲಗಳನ್ನು ನಿಷೇಧಿಸಬೇಕು . ಇಲ್ಲಿ ಟೇಬಲ್ ಕಾಫ್ ಆಗಿ ಉಪಯೋಗಿಸುವ ಪ್ಲಾಸ್ಟಿಕ್ ಹಾಳೆಯನ್ನು ಸರಕಾರವು ನಿಷೇಧಿಸಿದ ಮೇಲೆ ಗ್ರಾಮೀಣ ಪ್ರದೇಶದಲ್ಲಿ ಮತ್ತು ಕೊಳಚೆ ಪ್ರದೇಶದಲ್ಲಿ  ದವಸ ಧಾನ್ಯಗಳನ್ನು ವಿತರಿಸುವ , ಮಾರುವ ಪ್ಲಾಸ್ಟಿಕಗಳ ದುರ್ಬಳಿಕೆಯಾಗುವುದರಲ್ಲಿ ಸಂಶಯವಿಲ್ಲ . ಮುಖ್ಯವಾಗಿ ಇಂದು ಸಮಾಜದಲ್ಲಿ ನಿಷೇಧಿಸದೆ ಚಾಲ್ತಿಯಲ್ಲಿರುವ ಎಲ್ಲ ರೀತಿಯ ಕುಡಿಯುವ ನೀರನ್ನು ಸರಬರಾಜು ಮಾಡುವ ಪ್ಲಾಸ್ಟಿಕ್ ಬಾಟಲಿಗಳು ಮತ್ತು ತಂಪು ಪಾನೀಯ ಪ್ಲಾಸ್ಟಿಕ್ ಬಾಟಲಿಗಳ ತ್ಯಾಜ್ಯಗಳಿಂದ ಚರಂಡಿಗಳು , ಮೋರೆಗಳ ಮತ್ತು ಒಳಚರಂಡಿಗಳ ಸರಾಗ ಹರವಿಗೆ ತಡೆಯನ್ನು ಉಂಟು ಮಾಡುತ್ತಿರುವದರ ಜೊತೆಗೆ ನಗರ ಪ್ರದೇಶಗಳಲ್ಲಿಯ ಜಲಕಾಯಗಳ ಮಾಲಿನ್ಯಕ್ಕೆ ಮುಖ್ಯವಾಗಿ ಕಾರಣವಾಗುತ್ತಿದೆ .  ಈ  ಹೋರಾಟವನ್ನು ಮಾಡಬೇಕಗುತ್ತದೆ ಎಂದರು.

       ಪತ್ರಿಕಾಗೋಷ್ಠಿಯಲ್ಲಿ ಜೇಮ್ಸ್ ಯಾಮಾ,

ಆನಂದ ಜಾಧವ ,ಬಿ.ಎಚ್ . ಪೂಜಾರ ಉಪಸ್ಥಿತರಿದ್ದರು.

ನವೀನ ಹಳೆಯದು

نموذج الاتصال