ನಿನ್ನೆ ಧಾರವಾಡದ ಕೇಂದ್ರ ಗ್ರಂಥಾಲಯಕ್ಕೆ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ಭೇಟಿ .
ಧಾರವಾಡ ಜಿಲ್ಲೆಗೆ ಪ್ರಮುಖವಾದ ಗ್ರಂಥಾಲಯ ಇದಾಗಿದ್ದು ಓದುಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಬೇಕಾದ ಸವಲತ್ತುಗಳ ಬಗ್ಗೆ ಪರಿಶೀಲಿಸಿ ಗ್ರಂಥಾಲಯ ಸಮಿತಿ ಸದಸ್ಯರ ಜತೆ ಗ್ರಂಥಾಲಯ ಅಧ್ಯಕ್ಷರೊಂದಿಗೆ ಕಿರು ಸಭೆ ನಡೆಸಿ ಮುಂಬರುವ ದಿನಗಳಲ್ಲಿ ಗ್ರಂಥಾಲಯಕ್ಕೆ ಬೇಕಾದ ವ್ಯವಸ್ಥೆ ಹಾಗು ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕರಾದ ಕರಿಗಾರ ಡಾ ಮಹೇಶ ಹೊರಕೇರಿ ಅವರು ಉಪಸ್ಥಿತರಿದ್ದರು.