ಹುಬ್ಬಳ್ಳಿ ಯ ರಾಯನಾಳದಲ್ಲಿ ಮಯಾ೯ದಾ ಹತ್ತೆ,
ಹುಬ್ಬಳ್ಳಿ ಬಳಿಯ ರಾಯನಾಳನಲ್ಲಿ ಗ್ರಾಮ ಪಂಚಾಯತಿ ಸದಸ್ಯನನ್ನು ಆತನ ಹೆಂಡತಿಯ ತಂದೆ ಹಾಗೂ ಸಂಭಂದಿಗಳು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿ ರಾಯನಾಳದಲ್ಲಿ ನಡೆದಿದೆ.
ಹುಬ್ಬಳ್ಳಿ ಬ್ಯಾಂಕರ್ಸ್ ಕಾಲೋನಿ ವಾಸಿ ಹಾಗೂ ರಾಯನಾಳ ಗ್ರಾಮ ಪಂಚಾಯತಿ ಸದಸ್ಯ ದೀಪಕ ಪಟಧಾರಿಯು ಬೈಕ್ ನಲ್ಲಿ ಗೆಳೆಯ ಬಸವರಾಜ ಮಾರಡಗಿನನ್ನು ಬಿಡಲು ಹೋದಾಗ ಆತನ ಪತ್ನಿ ಪುಷ್ಪಾ ಸಂಭಂದಿಗಳು ಇತರರು ಸೇರಿ ನಿನ್ನೆ ರಾತ್ರಿ ರಾಯನಾಳ ಕುಂಬಾರ ಓಣಿ ಯಲ್ಲಿ ಹೊಂಚು ಹಾಕಿ ಕಲ್ಲಿನಿಂದ ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಕೆಳಗೆ ಬಿದ್ದ ದೀಪಕನ ತಲೆ ಮೇಲೆ ಕಲ್ಲನ್ನು ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದು.
ಮೃತ ದೀಪಕ ಕೊಲೆ ಆರೋಪಿ ಜೊತೆ ರಾಜಕೀಯ ವೈಷಮ್ಯ ಹೊಂದಿದ್ದು ಅಲ್ಲದೆ ಅವರ ಮಗಳನ್ನು ಪ್ರೀತಿಸಿ ಮದುವೆ ಆಗಿದ್ದು ಈ ಕುರಿತು ಅಸಮಾಧಾನಗೊಂಡಿದ್ದ ಆರೋಪಿ ಸಂಗಡಿಗರೊಂದಿಗೆ ನಿನ್ನೆ ರಾತ್ರಿ ಕೊಲೆಯನ್ನು ಮಾಡಿದ್ದಾರೆ ಎನ್ನಲಾಗಿದೆ ಹಳೆ ಹುಬ್ಬಳ್ಳಿಯಲ್ಲಿ ಮೆಡಿಕಲ್ ಶಾಪ ಹೊಂದಿರುವ ಆರೋಪಿಯನ್ನು ಮತ್ತು ಇನ್ನೂ ಕೆಲವರನ್ನು ಹಳೆ ಹುಬ್ಬಳ್ಳಿ ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.