ಬಡವರಿಗೆ ಆರೋಗ್ಯ ಭಾಗ್ಯವನ್ನು ನೀಡುತ್ತಿರುವ ಕೊರವಿ ಕುಟುಂಬ : ಬಸವರಾಜ ಹೊರಟ್ಟಿ

ಬಡವರಿಗೆ ಆರೋಗ್ಯ ಭಾಗ್ಯವನ್ನು ನೀಡುತ್ತಿರುವ ಕೊರವಿ ಕುಟುಂಬ : ಬಸವರಾಜ ಹೊರಟ್ಟಿ

ಹುಬ್ಬಳ್ಳಿ: ದಿ. ಮೂರುಸಾವಿರಪ್ಪ ಸಂಗಪ್ಪಣ್ಣಾ ಕೊರವಿಯವರ ಆದರ್ಶ ಜೀವನ ಹಗಲಿರುಳೆನ್ನದ ನಿರಾಪೇಕ್ಷೆಯಿಂದ ಸಮಾಜ ಸೇವೆ, ಧಾರ್ಮಿಕ ಚಟುವಟಿಕೆಗಳೊಂದಿಗೆ ಪರಿಶುದ್ಧ ರಾಜಕಾರಣಿಯಾಗಿ, ಸಮಾಜದ ಬಡವರಿಗೆ ಆರೋಗ್ಯ ಭಾಗ್ಯ ನೀಡುವ ಪುಣ್ಯಜೀವಿಯ ಎರಡನೇ ಪ್ರಣ್ಯಸ್ಮರಣೆಯನ್ನು ಸೃಜನಾತ್ಮಕವಾಗಿ ಆಚರಿಸುತ್ತಿರುವ ಕೊರವಿಯವರ ಕುಟುಂಬವನ್ನು ಹೊಗಳುತ್ತ ಅವರ ಮಕ್ಕಳು  ಮುಂದುವರೆಸಿಕೊಂಡು ಬರುತ್ತಿರುವುದು ಸಾಮಾನ್ಯ ಜನರಿಗೆ ಹಾಗೂ ಬಡವರಿಗೆ ಆಶಾಕಿರಣವಾಗಿದೆಯೆಂದು ಮುಖ್ಯ ಅತಿಥಿಗಳಾದ, ಮಾಜಿ ವಿ.ಪ.ಸಭಾಪತಿಗಳು ಹಾಗೂ ಶಾಸಕರಾಗಿರುವ ಬಸವರಾಜ ಹೊರಟ್ಟಿಯವರು, ಉಣಕಲ್ಲಿನ ಪಿ.ಬಿ ರೋಡಿನಲ್ಲಿರುವ ಸದ್ಗುರು ಸಿದ್ದೇಶ್ವರ ಮಠದ ಕೈಲಾಸ ಮಂಟಪದಲ್ಲಿ ಧಾರವಾಡ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ನಿರ್ಮಲಾ ಫೌಂಡೇಶನ್ ಸಹಯೋಗದೊಂದಿಗೆ, ದಿ. ಮೂರುಸಾವಿರಪ್ಪ ಕೊರವಿಯವರ ಪ್ರೀತಿಯ ಪುಣ್ಯ ಸ್ಮರಣೆ ನಿಮಿತ್ತ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ -ಸಹಯೋಗದಿಂದ ಕೋವಿಡ  ಲಸಿಕೆ, ಆಯುಷ್ಮಾನ ಭಾರತ, ಆರೋಗ್ಯ ಕರ್ನಾಟಕ ಆರೋಗ್ಯ ಕಾರ್ಡ್ ನೋಂದಣಿ, ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾರ್ಯಕ್ರಮ ಪ್ರತಿ ವರ್ಷ ನಡೆಯುವದು ವಿಶೇಷವೆಂದರು, 
ಸಮಾಜದ ಸಾಮಾನ್ಯ ಜನರಿಗೆ -ಬಡವರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ, ಉಚಿತವಾಗಿ ಕಣ್ಣಿನ ಚಿಕಿತ್ಸೆ ನೀಡಲು ಇಂತ ದೊಡ್ಡ ಪ್ರಮಾಣದಲ್ಲಿ ಸುವ್ಯವಸ್ಥೆಯಿಂದ ನಡೆಸುತ್ತಿರುವ ಕೊರವಿ ಕುಟುಂಬದ ಸಮಾಜ ಮುಖಿ ರಾಜಣ್ಣ ಕೊರವಿಯವರ ಶ್ರಮ ಸಾರ್ಥಕವಾಗಿದೆಯೆಂದು  ಮಹಾಪೌರ ವೀರೇಶ ಅಂಚಟಗೇರಿ ಪ್ರಶಂಸಿಸಿ ಸರಕಾರ ಮಾಡುವ ಕೆಲಸವನ್ನು ಕೊರವಿ ಕುಟುಂಬ ಮಾಡುತ್ತಿದೆಯೆಂದರು,

ಡಾ|| ಎಂ. ಶ್ರೀನಿವಾಸ ಜೋಶಿಯವರು, ಸಮಾಜದಲ್ಲಿ ಅನಗತ್ಯ ಅಂಧತ್ವ ಕುರಿತು ಚಿಂತನೆ ಮಾಡುತ್ತ, ಸಮಾಜದಲ್ಲಿ ನೇತ್ರದಾನ, ಅಂಗಾಂಗ ದಾನಗಳ ಕುತಿರು ತಪ್ಪು ಕಲ್ಪನೆಗಳಿದ್ದು ಅವುಗಳನ್ನು ಹೋಗಲಾಡಿಸಬೇಕೆಂದರು.

ಜಿಲ್ಲಾ ಆರೋಗ್ಯಾಧಿಕಾಗಳಾದ ಡಾ|| ಕಂಗೌಡರರವರು ಸರಕಾರವು ಸಮಾಜದ ಸಾಮಾನ್ಯರ ಆರೋಗ್ಯಕ್ಕಾಗಿ ಹಲವು ಯೋಜನೆಗಳನ್ನು ಹಮ್ಮುಕೊಂಡಿದ್ದು ಅವುಗಳನ್ನು ಕಾರ್ಯರೂಪಕ್ಕೆ ತರುತ್ತಾ ಇಂತಹ ಸಮಾಜ ಮುಖಿ ಆರೋಗ್ಯ ಶಿಬಿರಕ್ಕೆ ನಮ್ಮ ಇಲಾಖೆ ಸದಾ ಜೊತೆಗಿರುತ್ತದೆಯೆಂದರು.
ಮಾರುತಿ ಭೋದಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ, ಸಮಾರಂಭದ ವೇದಿಕೆಯ ಮೇಲಿನ ಗಣ್ಯರನ್ನು ಸಭೆಯಲ್ಲಿ ಉಪಸ್ಥಿತರಿದ್ದ ಸರ್ವರನ್ನು ಸಿಬಿಎಸ್ ಡೈರೆಕ್ಟರ ಡಾ|| ವಿಶ್ವಾನಾಥ ಕೊರವಿಯವರು ಸ್ವಾಗತಿಸಿದರು.ಪಾಲಿಕೆ ಸದಸ್ಯರಾದ  ರಾಜಣ್ಣ ಕೊರವಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತ ತಮ್ಮ ತಂದೆ ಮೂರುಸಾವಿರಪ್ಪ ಕೊರವಿಯವರು ಹುಧಾ ನಗರಾಭಿವೃದ್ಧಿ ಪ್ರಾಧಿಕಾರ, ಅಧ್ಯಕ್ಷರಿದ್ದ ಕಾಲದಲ್ಲಿ ಕೇವಲ ಬಡವರಿಗಾಗಿ ಸಾವಿರಾರು ಪ್ಲಾಟ್‌ಗಳನ್ನು ಹಂಚಿ ತಮ್ಮ ಸಂಬಂಧಿಕರನ್ನು ಈ ವಿಷಯದಲ್ಲಿ ದೂರ ಇಟ್ಟಿದ್ದರೆಂದೂ, ಸದ್ಯದ ಈ ಕೈಲಾಸ ಮಂಟಪವನ್ನು , ಕಟ್ಟಿಸಿಕೊಟ್ಟದ್ದು, ಮಠದ ಶಿಖರವನ್ನೂ ಸಹ ಒಬ್ಬಧಾನಿ ಕಟ್ಟಿಸಿ ಕೊಡಲು ಮಾಡಿದ ಪ್ರಯತ್ನವನ್ನು ವಿವರಿಸಿದರು ಹಾಗೂ ಅವರ ಆದರ್ಶವನ್ನು ತಮ್ಮ ಕುಟುಂಬದ ಸರ್ವರೂ ಪಾಲಿಸುತ್ತಿದ್ದೇವೆಯೆಂದರು.

ಸಮಾರಂಭದಲ್ಲಿ ವೇದಿಕೆ ಮೇಲಿದ್ದ, ಬಸವರಾಜ ಹೊರಟ್ಟಿ, ಶಾಸಕರು ಮಾಜಿ ಸಭಾಪತಿಗಳು,  ಮಹಾಪೌರ  ವೀರೇಶ ಅಂಚಟಗೇರಿ, ಉಪಮೇಯರ ಶ್ರೀಮತಿ ಉಮಾ ಮುಕುಂದ , ಪಾಲಿಕೆ  ಸಭಾನಾಯಕ ತಿಪ್ಪಣ್ಣ  ಮಜ್ಜಿಗೆ, ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ,  ಡಿ ಎಚ್ ಓ    ಡಾ// ಕರಿಗೌಡರ , ಮಾಜಿ ಬಿಡಿಎ ಅಧ್ಯಕ್ಷ ಲಿಂಗರಾಜ ಪಾಟೀಲ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಸಾಹುಕಾರ, ಡಾ// ತಮ್ಮಣ್ಣ, ಡಾ// ಶ್ರೀನಿವಾಸ ಜೋಶಿ,  ವೆಂಕಟೇಶ,  ಸಜ್ಜನರ, ಡಾ|| ಕಳಸದ ಮಠ, ಡಾ|| ಆರ್ ಎಸ್ ಹಿತ್ತಲಮಠ ಮತ್ತು  ಶಿಬಿರಾರ್ಥಿಗಳಿಗೆ ಉಚಿತ ಔಷಧಿ ನೀಡಿದ ಡಾ|| ಸವಿತಾ ದೀಕ್ಷಿತ್ ಮುಂತಾದವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.

ಕಾಯ೯ಕ್ರಮದಲ್ಲಿ ಉಣಕಲ್ಲಿನ ರೈತ ಸಹಕಾರಿ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳನ್ನೂ ಸತ್ಕರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯ ಡಾ| ಸಿದ್ದಯ್ಯನವರು ಹೀರೆಮಠ ಅವರು ವಹಿಸಿದ್ದರು. ಸಿ ಬಿ ಮರಿಗೌಡ್ರ (ಕಾಮಾಧೇನು), ಪ್ರೊ. ಕೆ. ಎಸ್. ಕೌಜಲಗಿ, ಶಶಿಧರ ಕೊರವಿ, ರಮೇಶ ಕೊರವಿ, ಮಹಾದೇವಪ್ಪ ಮೆಣಸಿನಕಾಯಿ, ಎಸ್ ಎಯ ನೇಕಾರ ಊರಿನ ಗಣ್ಯರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال