ಧಾರವಾಡ : ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು, ಧಾರವಾಡ ತಾಲೂಕು ಘಟಕದ ಅಧ್ಯಕ್ಷರಾಗಿ ಅರುಣಕುಮಾರ ಶೀಲವಂತ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ಧಾರವಾಡ ಉಳವಿ ಚೆನ್ನ ಬಸವೇಶ್ವರ ದೇವಸ್ಥಾನದಲ್ಲಿ ಬಣಜಿಗ ಸಮಾಜದ ಸಭೆ ಕರೆಯಲಾಗಿತ್ತು ಈ ಸಭೆಯಲ್ಲಿ ಪದಾಧಿಕಾರಿಗಳು ಸರ್ವಾನುಮತದಿಂದ ಅಧ್ಯಕ್ಷರಾಗಿ ಅರುಣ ಶೀಲವಂತ ಅವರನ್ನು ಆಯ್ಕೆ ಮಾಡಿರುವುದಕ್ಕೆ ಸಹಮತ ವ್ಯಕ್ತಪಡಿಸಿದರು.
ಅದರಂತೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸಮಾಜ ಕಾರ್ಯ ಚಟುವಟಿಕೆಗಳಿಗೆ ವೇಗ ನೀಡಲು ಹಲವಾರು ಕಾರ್ಯಯೋಜನೆ ರೂಪಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲಾಗುತ್ತದೆ ಎಂದು ಬಣಜಿಗ ಸಂಘದ ನೂತನ ತಾಲೂಕು ಘಟಕದ ಅಧ್ಯಕ್ಷ ಅರುಣಕುಮಾರ ಶೀಲವಂತ ತಿಳಿಸಿದರು.
ಅದರಂತೆ ಸಂಘದ ಸದಸ್ಯರು ಇನ್ನೂಮುಂದೆ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಸಂಘದ ಸಭಾಭವನದಲ್ಲಿ ನಡೆಸಬೇಕು ಸಂಘದ ಸಭಾಭವನದಲ್ಲಿ ಮುಂದಿನ ಸಭೆ ಕರೆಯಲು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಬಣಜಿಗ ಸಂಘದ ಜಿಲ್ಲಾಧ್ಯಕ್ಷ ಶೇಖರ್ ಕವಳಿ, ಸಮಾಜದ ಹಿರಿಯರಾದ ಪ್ರೊ.ವಿ.ಸಿ ಸವಡಿ, ಸಮಾಜದ ಯುವ ಮುಖಂಡ ಶಿವಾನಂದ ಕವಳಿ, ಜಿಲ್ಲಾ ಕಾರ್ಯದರ್ಶಿ ವಿರೇಶ ಕೇಲಗೇರಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕುಂಬಾರಿ, ಖಜಾಂಚಿ ಮಾತೇಂಶ ಗುಂಜ್ಜಟ್ಟಿ, ಹೈಕೋರ್ಟ್ ವಕೀಲರಾದ ರಾಜಶೇಖರ ಗುಂಜಾಳ, ಮಹೇಶ ಬಿಳಿಹಾಳ, ಶಾಂತವೀರ ಬೇಟಗೇರಿ, ರಾಜೇಂದ್ರ ಕಪಲಿ, ಸಂತೋಷ ಆನಿಶೇಟ್ಟರ್, ಅಶೋಕ ಶೆಟ್ಟರ್, ಹೈಕೋರ್ಟ್ ವಕೀಲ ನಾಗರಾಜ ನಾಗಶೇಟ್ಟಿ, ವಿಶ್ವನಾಥ ಅಂಗಡಿ ಸೇರಿದಂತೆ ಹಲವರು ಇದ್ದರು.
ಹಲವು ಸುದ್ದಿಗಾಗಿ ನಮ್ಮ STAR 74 NEWS youtub ಚಾನಲ್ ಗೆ subscribe ಮಾಡಿ ನಮ್ಮನ್ನು ಸಹಕರಿಸಿ.