ಮನೆಯಲ್ಲಿಯೇ ನೇಣಿಗೆ ಶರಣಾದ ಯುವಕ
ಧಾರವಾಡ:-- ನಗರದ ಮದಿಹಾಳದಲ್ಲಿ ಯುವಕನೋರ್ವ ಮನೆಯಲ್ಲಿಯೇ ನೇಣು ಹಾಕಿಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಧಾರವಾಡದ ಕಾರ್ತಿಕ ಹಿರೇಮಠ(22) ಎಂಬ ಯುವಕನೇ ನೇಣಿಗೆ ಶರಣಾದ ದುರ್ದೈವಿಯಾಗಿದ್ದು, ರಾತ್ರಿ ಮಲಗಲು ಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗಿನ ಜಾವ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯನ್ನ ಕಳೆದುಕೊಂಡಿರುವ ಕಾರ್ತಿಕ, ಹಲವು ದಿನಗಳಿಂದ ಕುಡಿತದ ಚಟಕ್ಕೆ ದಾಸನಾಗಿದ್ದನೆಂದು ಹೇಳಲಾಗುತ್ತಿದೆ.
ಘಟನೆಯ ಕುರಿತು ಧಾರವಾಡದ ಉಪನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೇ, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಕಾರ್ತಿಕನ ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬುದನ್ನ ಪೊಲೀಸರು ತನಿಖೆಯಿಂದಲೇ ತಿಳಿದುಬರಬೇಕಾಗಿದೆ.