ಜನರು ಆರ್ಥಿಕ ಸಾಮಾಜಿಕ ಉನ್ನತಿ ಸಾಧಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಉತ್ತಮ ಕಾರ್ಯ : ಮುರುಘಾಮಠದ ಶ್ರೀ*

*ಜನರು ಆರ್ಥಿಕ ಸಾಮಾಜಿಕ ಉನ್ನತಿ ಸಾಧಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಉತ್ತಮ ಕಾರ್ಯ : ಮುರುಘಾಮಠದ ಶ್ರೀ* 

ಧಾರವಾಡ : ಸಮಾಜದಲ್ಲಿ ಜನರ ಆರ್ಥಿಕ ಸ್ಥಿತಿ ಗತಿ ಉತ್ತಮ ಮಾಡುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿದೆ ಅದರಂತೆ ನೂತನವಾಗಿ ಪ್ರಾರಂಭವಾದ ಪ್ರೀಯದರ್ಶಿನಿ ವಿವಿಧೋದ್ದೇಶ ಸಹಕಾರಿ ಸಂಘ ಬಡ ಜನರ ಕಲ್ಯಾಣ ಮಾಡಲಿ ಎಂದು ಮುರುಘಾಮಠದ ಶ್ರೀಗಳಾದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಿಳಿಸಿದರು.

ಧಾರವಾಡ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಭಾಭವನದಲ್ಲಿ ಪ್ರೀಯದರ್ಶಿನಿ ವಿವಿಧೋದ್ದೇಶ ಸಹಕಾರಿ ಸಂಘದ ಲೋಕಾರ್ಪಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಆರ್ಥಿಕವಾಗಿ ಸಾಮಾಜಿಕವಾಗಿ ಉನ್ನತಿ ಸಾಧಿಸುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಬಹಳಷ್ಟು ಒಳ್ಳೆಯ ಕೆಲಸ ಮಾಡುತ್ತಿವೆ. ಅದರಂತೆ ಧಾರವಾಡದಲ್ಲಿ ಸೇವಾ ಮನೋಭಾವ ಹೊಂದಿರುವ ಪ್ರೀಯದರ್ಶಿನಿ ವಿವಿಧೋದ್ದೇಶ ಸಹಕಾರಿ ಸಂಘ ಬಡ ಜನರ ಕಲ್ಯಾಣಕ್ಕಾಗಿ ಸ್ಥಾಪನೆಯಾಗಿದ್ದು ಉತ್ತಮ ಕಾರ್ಯ ಮಾಡಿ ಜನಮೆಚ್ಚುಗೆ ಪಡೆಯಲಿ ಎಂದು ಆಶಿರ್ವದಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಈರಣ್ಣ ಮತ್ತಿಕಟ್ಟಿ, ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪ ಕೊಟಗಿ, ಬಣಜಿಗ ಸಂಘದ ಅಧ್ಯಕ್ಷ ಶೇಖರ್ ಕವಳಿ, ವಕೀಲ ಸಂಘದ ಸಂಘದ ಅಧ್ಯಕ್ಷ ಪೋಲೀಸ್ ಪಾಟೀಲ್, ಶಿವಾನಂದ ಕವಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ನವೀನ ಹಳೆಯದು

نموذج الاتصال