ಶ್ರೀ ಮರಗಮ್ಮ ದೇವಿ ೧೧೫ ನೇ ವರ್ಷದ ಐತಿಹಾಸಿಕ ಜಾತ್ರಾ ಮಹೋತ್ಸವದ ದೇವಿಯ ಬೆಳ್ಳಿ ಮುಖದ ಭವ್ಯ ಮೆರವಣಿಗೆಯು ಇಂದು ಜರುಗಿತು.
ಧಾರವಾಡ ಶಹರದ ಕಿಲ್ಲೆಯ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ಕುಂಭ ಮೇಳ ಹಾಗೂ ವಿಶೇಷ ವಾದ್ಯಗಳೊಂದಿಗೆ ಹೊರಟ ಮೆರವಣಿಗೆ ಸುಭಾಸ ರೋಡ. ಗಾಂಧಿಚೌಕ.
ಕಾಮನಕಟ್ಟಿ. ಹೊಸಯಲ್ಲಾಪೂರ ಮುಖ್ಯ ರಸ್ತೆ ಮೂಲಕ ಸಂಚರಿಸಿ ಛಾವಣಿ ಓಣಿಯ ಶ್ರೀ ಮರಗಮ್ಮ ದೇವಸ್ಥಾನಕ್ಕೆ ಬಂದು ತಲುಪಿತು.
ದೇವಸ್ಥಾನದ ಅರ್ಚಕ ಸುರೇಶ ಚಾಬೂಕಸವಾರ ನೇತ್ರತ್ವದಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು ಸುಮಂಗಲೆಯರ ಹಾಗೂ ಭಕ್ತರ ಸಮೂಹ ಉಘೆ ಉಘೆ ಉದ್ಘೋಷದೊಂದಿಗೆ ದೇವಿಯ ಬೆಳ್ಳಿಯ ಮುಖದ ಮೆರವಣಿಗೆಯನ್ನು ಭವ್ಯವಾಗಿ ಸ್ವಾಗತಿಸಿದರು
STAR 74 NEWS ಚನಲ್ಗೆ SUBSCRIBE ಮಾಡಿ ಸಹಕರಿಸಿ