ಗುರುಗಳಿಗೆ ಗೌರವ ಕೊಡುವ ಇಚ್ಛಾಶಕ್ತಿ ಬೆಳೆಸಿಕೊಳ್ಳಲು ಕರೆ
ಧಾರವಾಡ:--ಗುರುವಿನ
ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ ಎಂಬ ಮಾತಿನಂತೆ ಪ್ರತಿಯೊಬ್ಬರು
ಗುರುಗಳಿಗೆ ಗೌರವವನ್ನು ಕೊಡುವ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕೆಂದು
ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷರು ಹಾಗೂ ಉದ್ಯಮಿದಾರರು ಆದ ಮನೋಹರ.ಎನ್.ಮೋರೆ ಅಭಿಪ್ರಾಯಪಟ್ಟರು.
ಅವರು ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳದಲ್ಲಿ ನಿವೃತ್ತಿಹೊಂದಿದಂತಹ ಶಿಕ್ಷಕರನ್ನು ಹಾರ್ದಿಕವಾಗಿ ಸನ್ಮಾನಿಸುವ ಮೂಲಕ ವಿಶಿಷ್ಠವಾಗಿ ಗುರು ಪೂರ್ಣಿಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗುರುಗಳ ಬಗ್ಗೆ ಸದಾ ಶ್ರಧಾಭಕ್ತಿಯನ್ನು ಹೊಂದಿರಬೇಕು ಯಾವುದೇ ಕ್ಷೇತ್ರದಲ್ಲಿ ಪ್ರತಿಯೊಬ್ಬ ಏಳ್ಗೆಯನ್ನು ಪಡೆಯುವದು, ಅವರ ಪ್ರತಿಭೆ ಹೊರಹೊಮ್ಮಲು ಗುರುಗಳ ಆಶೀರ್ವಾದ ಅವಶ್ಯವೆಂದರು.
ಕಾರ್ಯಕ್ರಮದಲ್ಲಿ ಶಾಲಾ ಗುರುಗಳಾದ ವ್ಹಿ. ಜಿ. ದಿಕ್ಷಿತ, ಎಮ್. ವ್ಹಿ. ಉಂಡಾಳೆ,
ವ್ಹಿ. ಬಿ. ದಂಡಿನ ಹಾಗೂ ಆರ್. ಎನ್. ಕದಂ ಅವರುಗಳಿಗೆ ಹಾಗೂ ಪ್ರಸ್ತುತವಾಗಿ ಅಂಗಸಂಸ್ಥೆಗಳಲ್ಲಿ ಕಾರ್ಯ
ನಿರ್ವಹಿಸುವಂತಹ ಶಿಕ್ಷಕ-ಶಿಕ್ಷಕಿಯರಿಗೆ ಆಡಳಿತ ಮಂಡಳಿಯ ವತಿಯಿಂದ ಗೌರವ ಸನ್ಮಾನವನ್ನು ಮಾಡಿ
ಗುರುಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ಅರ್ಪಿಸಲಾಯಿತು.
ಗುರುವಂದನಾ ಕಾರ್ಯಕ್ರಮದಲ್ಲಿ
ಅಧ್ಯಕ್ಷರಾದ ಎಮ್. ಎನ್.ಮೋರೆ ಅವರು ನಿವೃತ್ತಿ ಹೊಂದಿದ ಶಿಕ್ಷಕರ ಸೇವೆಯನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ
ಉಪಾಧ್ಯಕ್ಷರಾದ ಯಲ್ಲಪ್ಪ ಚವ್ಹಾಣ, ಕಾರ್ಯಾಧ್ಯಕ್ಷರಾದ ಸುಭಾಸ ಶಿಂಧೆ, ಗೌ.ಕಾರ್ಯದರ್ಶಿಗಳಾದ ರಾಜು
ಬಿರ್ಜೇನವರ, ಸಹ-ಕಾರ್ಯದರ್ಶಿಗಳಾದ ದತ್ತಾತ್ರೇಯಮೊಟೆ ಹಾಗೂ ನಿರ್ದೇಶಕರಾದ ಈಶ್ವರ ಪಾಟೀಲ, ಶಿವಾಜಿ ಸೂರ್ಯವಂಶಿ, ಸುಭಾಸ ಪವಾರ, ಅನಿಲಕುಮಾರ ಭೋಸಲೆ, ವಿಠ್ಠಲ ಚವ್ಹಾಣ, ಮಲ್ಲೇಶಪ್ಪಾ ಶಿಂಧೆ, ಸಂತೋಷ, ಬಿರ್ಜೇನವರ, ರಾಜು ಕಾಳೆ, ಸುನಿಲ ಮೋರೆ, ಪ್ರಸಾದ
ಹಂಗಳಕಿ ಹಾಗೂ ಪ್ರಾಚಾರ್ಯರಾದ ಎಮ್.ಎಮ್. ಘಾಟಗೆ, ಎ.ಬಿ.ಬಾಬರ, ಶ್ರೀಮತಿ ಶೈಲಶ್ರೀ ಎಮ್. ಸಂಕೋಜಿ ಹಾಗೂ ಎಮ್. ಎಸ್. ಗಾಣಿಗೆರ
ಹಾಗೂ ಬೊಧಕ ಮತ್ತು ಬೊಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.