ಅಖಿಲ ಭಾರತ ರೈತ - ಕೃಷಿಕಾರ್ಮಿಕರ ಸಂಘಟನೆ AIKKMS ಧಾರವಾಡ
ಇಂದು ಧಾರವಾಡಲ್ಲಿ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ ವತಿಯಿಂದ ನರೇಗಾ ಕೂಲಿ ಕಾರ್ಮಿಕರಿಗೆ ಸಲಕರಣೆ ವೆಚ್ಚ ಕಡಿತ ಮಾಡಿರುವುದನ್ನು ಹಾಗೂ 150 ಮಾನವು ದಿನಗಳನ್ನು ಕಡ್ಡಾಯವಾಗಿ ನೀಡಬೇಕೆಂದು ಆಗ್ರಹಿಸಿ ಕಲಾಭವನ ಮೈದಾನದಿಂದ ಜಿಲ್ಲಾ ಪಂಚಾಯತ ವರೆಗೆ ಪ್ರತಿಭಟನಾ ಮೆರವಣೆಗೆ ಮಾಡಿ ಜಿಲ್ಲಾ ಸಿ ಇ ಒ ಗೆ ಮನವಿ ಸಲ್ಲಿಸಲಾಯಿತು . : ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ ಉದ್ಯೋಗ ಖಾತ್ರಿ ( ನರೇಗಾ ) ಯೋಜನೆಯನ್ನು ದೇಶದ ಜನ ಸಾಮಾನ್ಯರು ತಮ್ಮ ಜೀವನ ನಿರ್ವಹಣೆಗಾಗಿ ತಮ್ಮ ವಾಸ ಸ್ಥಳಗಳನ್ನು ಬಿಟ್ಟು ಬೇರೆ ಸ್ಥಳಗಳಿಗೆ ಗುಳೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಜಾರಿಗೆ ತರಲಾಯಿತು . ಆದರೆ ಇತ್ತೀಚೆಗೆ ಈ ಯೋಜನೆಯನ್ನು ಸರಿಯಾಗಿ ಜಾರಿಗೆ ಬಂದಿಲ್ಲ , ಆರೋಪಿಸಿದರು . ಧಾರವಾಡ ಜಿಲ್ಲೆಯಲ್ಲಿ ಕಳೆದ ಎರಡು - ಮೂರು ವರ್ಷ ಅತಿಯಾದ ಮಳೆಯಿಂದ ಈ ಭಾಗದ ರೈತರು ಸಾಕಷ್ಟು ನಷ್ಟಕ್ಕೆ ಒಳಗಾಗಿದ್ದು ತಮ್ಮ ಗಮನಕ್ಕಿದೆ ಎಂದು ಭಾವಿಸಿದ್ದೇವೆ . ಈ ಅತಿಯಾದ ನಷ್ಟಕ್ಕೆ ಸಿಲುಕಿದ ಕೆಲವು ರೈತರು ಅವರು ಮಾಡಿದ ಸಾಲದ ಭಾದೆ ಅನುಭವಿಸಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಇಂತಹ ಪರಿಸ್ಥಿತಿ ನಮ್ಮ ತಾಲೂಕಿನಲ್ಲಿ ತಲೆದೂರಿದೆ . ದುಡಿಯುವ ರೈತ ಕಾರ್ಮಿಕರ ಪರಿಸ್ಥಿತಿ ಇತ್ತ ಶೋಚನೀಯ ಆಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಭಾರಿ ನರೇಗಾ ಯೋಜನೆ ಗೆ ನೀಡುವ ಮೊತ್ತವನ್ನು ಕಡಿತ ಗೊಳಿಸಿರುವುದು ಜನ ಸಾಮಾನ್ಯರಲ್ಲಿ ಆಘಾತ ಉಂಟು ಮಾಡಿದೆ . ಯೋಜನೆಯ ಕೆಲಸಕ್ಕೆ ಬಳಸುವ ಸಲಕರಣೆಗಳನ್ನು ಹರಿತಗೊಳಿಸುವ ವೆಚ್ಚವನ್ನು ರದ್ದು ಮಾಡಿರುವುದು ಸಹ ಗಾಯದ ಮೇಲೆ ಜೊತೆಗೆ ಈ ಬರೆ ಎಳೆದಂತಾಗಿದೆ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ್ಣ ಜಡಗನ್ನವರ ಮಾತನಾಡಿ ಇತ್ತೀಚೆಗಿನ ದಿನಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆಯೇ ಸಿಗುತ್
ಮತ್ತು ಅವರು ಖರೀದಿಸುವ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ . ಈ ಕಾರಣದಿಂದಾಗಿಯೂ ಜನಸಾಮಾನ್ಯರು ಹೈರಾಣಾಗಿದ್ದಾರೆ ಇಂತಾ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ಜೊತೆಗೆ ನಿಲ್ಲದೆ , ಅವರನ್ನ ಸುಲಿಗೆ ಮಾಡತ್ತಿದೆ ಎಂದು ಆರೋಪಿಸಿದ್ದರು . ಮುಂದುವರೆದ ಅವರು ಉದ್ಯೋಗ ಖಾತ್ರಿ ( ನರೇಗಾ ) ಯೋಜನೆಯಡಿ ಸಮರ್ಪಕವಾಗಿ ಕೆಲಸ ಸಿಗುತ್ತಿಲ್ಲ , ನರೇಗಾ ಕೂಲಿ ಕಾರ್ಮಿಕರಿಗೆ ಸಂಪೂರ್ಣ ಕೂಲಿ ಸಿಗುತ್ತಿಲ್ಲ , ನರೇಗಾ ಯೋಜನೆ ಕೆಲಸ ಮಾಡುವ ಸಲಕರಣೆಗಳ ಹರಿತಗೊಳಿಸುವ ವೆಚ್ಚವನ್ನು ರದ್ದುಗೊಳಿಸಿರುವ ಆದೇಶವನ್ನು ಹಿಂದೆಗೆದುಕೊಳ್ಳಿ ಬೇಕು . ಮುಂದಿನ ದಿನಗಳಲ್ಲಿ ನರೇಗಾ ಯೋಜನೆಯಡಿ ಒಂದು ವರ್ಷಕ್ಕೆ 200 ದಿನ ಕೆಲಸ ಹಾಗೂ ಒಂದು ದಿನಕ್ಕೆ ರೂ .600 ಕೂಲಿ ಒದಗಿಸಬೇಕೆಂದು ಒತ್ತಾಯಿಸಿದ್ದರು . ಮನವಿ ಪತ್ರ ಸ್ವೀಕರಿಸಿದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ ರವರು ಜಿಲ್ಲಾ ಮಟ್ಟದ ಬೇಡಿಕೆಗಳನ್ನು ಈಡೇರೆಸುವ ಭರವಸೆ ನೀಡಿದ್ದರು . ಮತ್ತು ಸರಕಾರದ ಹಂತದಲ್ಲಿನ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ್ದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕಛೇರಿ ಕಾರ್ಯದಶಿ ಗೋವಿಂದ ಕೃಷ್ಣನಪ್ಪನವರ ವಹಿಸಿದ್ದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಹನುಮೇಶ ಹುಡೇದ , ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ಜಿಲ್ಲಾ ಸಮಿತಿ ಸದಸ್ಯರಾದ ಮಾರತಿ ಪೂಜಾರ . ಬಾಳೇಶ ಭರಗಣ್ಣನವರ , ಜಗದೀಶ ಪೂಜಾರ , ಗಿರೀಶ ಪೂಜಾರ ,v ರವಿ ಬೆಟಗುರ್ಕಿ . ಗಂಗಮ್ಮ , ನೀಲಪ್ಪ ವಡ್ಡರ ಮುಂತಾದವರ ಇದ್ದರು .