ಧಾರವಾಡದ ಮದರಮಡ್ಡಿಯ ನಾಲ್ಕು ಸರಕಾರಿ ಶಾಲೆಗಳ 441 ಮಕ್ಕಳಿಗೆ ನೋಟ್ ಬುಕ್ ವಿತರಣೆ
ಧಾರವಾಡ : ಧಾರವಾಡದ ಜನಜಾಗೃತಿ ಸಂಘ ಹಾಗೂ ಬಸವರಾಜ ಕೊರವರ ಗೆಳೆಯರ ಬಳಗದ ವತಿಯಿಂದ ಶುಕ್ರವಾರ
ಧಾರವಾಡದ ಮದರಮಡ್ಡಿಯ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಹಾಗೂ ಉರ್ದು ಶಾಲೆಯ 441 ಮಕ್ಕಳಿಗೆ
ನೋಟ್ ಬುಕ್ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ಪ್ರಕೃತಿ ನಮಗೆ ಎನೆಲ್ಲಾ ಕೊಟ್ಟಿದೆ. ನಿಸರ್ಗದ ಸೌಂದರ್ಯ ಅನುಭವಿಸಬೇಕೆ ಹೊರತು ಹಾಳು ಮಾಡುವ ಅಧಿಕಾರ ನಮಗಿಲ್ಲ. ಮನುಷ್ಯನಿಗೆ ಉತ್ತಮವಾದ ಗಾಳಿ, ನೀರು, ಅನ್ನ, ಆಹಾರ ಸಿಗಬೇಕಾದರೆ ಗಿಡಮರಗಳ ಪಾಲನೆ, ಪೋಷಣೆ,ಸಂರಕ್ಷಣೆ ಮಾಡಬೇಕೆಂದು ಹೇಳಿದರು.
ಜನಜಾಗೃತಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಕಿರಣಗಿ, ಸರಕಾರಿ ಶಾಲೆಯ ಬಲವರ್ಧನೆ ಆಗಬೇಕು. ಯಾವೊಬ್ಬ ಮಗುವು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದಾಶಯದಿಂದ ಧಾರವಾಡ ತಾಲೂಕಿನ ಪ್ರಮುಖ ಎಲ್ಲಾ ಸರಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಗುತ್ತಿದೆ.
ಈ ಪೈಕಿ
30ಕ್ಕೂ ಸರಕಾರಿ ಶಾಲೆಯ 12 ಸಾವಿರಕ್ಕೂ ಅಧಿಕ ಮಕ್ಕಳಿಗೆ ಈಗಾಗಲೇ ಅಂದಾಜು 40 ಸಾವಿರ ನೋಟ್ ಬುಕ್ ವಿತರಣೆ ಮಾಡಲಾಗಿದ್ದು, ಇಂದು ಧಾರವಾಡ ಶಹರದ ಒಂಬತ್ತು ವಾರ್ಡ್ ಗಳ ಸರಕಾರಿ ಶಾಲೆಯ ಸಾವಿರಾರು ಮಕ್ಕಳಿಗೆ ನೋಟ್ ಬುಕ್ ವಿತರಣೆ ಕಾರ್ಯಕ್ರಮ
ಧಾರವಾಡದ ಮದರಮಡ್ಡಿಯ ನಾಲ್ಕು ಸರಕಾರಿ ಶಾಲೆಗಳಿಂದ ಆರಂಭಗೊಂಡಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಆರ್ ಸಿ ಮಂಜುನಾಥ ಅಡಿವೇರ್, ಸಿ ಆರ್ ಪಿ ಶಿವಬಸವ ಜ್ಯೋತಿ, ಎಸ್ ಡಿಎಂಸಿ ಸದಸ್ಯರಾದ ರಮೇಶ ದೊಡವಾಡ, ರವಿ ಸಾಂಬ್ರಾಣಿ, ಸೇರಿದಂತೆ ಗುರು ಹಿರಿಯರು, ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.