Sun 26 Jun: DHARWAD
ಹಳೆ APMCಯಲ್ಲಿ ಮಹಾ ಪೌರರ ಭೇಟಿ.
ಧಾರವಾಡದ ನಗರದ ಹಳೆ ಎ.ಪಿ.ಎಂ.ಸಿ. ಮಾರುಕಟ್ಟೆ ಆವರಣದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದು, ಅಲ್ಲಿ ಕಾಮಗಾರಿಯ ಅಭಿವೃದ್ಧಿಯ ಹಂತದ ಬಗ್ಗೆ ಮಹಾ ಪೌರರಾದ ಶ್ರೀ ಈರೇಶ ಅಂಚಟಗೇರಿ .ಯವರು ವೀಕ್ಷಣೆ ಗೆ ಭೇಟಿ
ಸಂದರ್ಭದಲ್ಲಿ ಅಲ್ಲಿಯ ವರ್ತಕರು ಅಲ್ಲಿನ ಸ್ವಚ್ಛತೆಯ ಸಮಸ್ಯೆಗಳ ಬಗ್ಗೆ ಹೇಳಿದಾಗ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಶೀಘ್ರವೇ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷರಾದ ಶ್ರೀ ಶಿವಶಂಕರ ಹಂಪಣ್ಣವರ, ಶ್ರೀ ಪರಪ್ಪ ಕುಸುಗಲ್ , ಶ್ರೀ ವಿಶ್ವನಾಥ ನಡಕಟ್ಟಿ , ಶ್ರೀ ಬಸವರಾಜ ಸುರೇಬಾನ , ಶ್ರೀ ಬಸವರಾಜ ತೆಗ್ಗಿ,
ಶ್ರೀ ಈರಣ್ಣ ಹಂಚಿನಮನಿ, ಶ್ರೀ ಮಲ್ಲಿಕಾರ್ಜುನ ನಂದಿಗೊಳ , ಶ್ರೀ ಉಮೇಶ ಗುಡ್ಡದ , ವರ್ತಕರ ಸಂಘದ ಪದಾಧಿಕಾರಿಗಳು ಹಾಗೂ ವರ್ತಕರು ಉಪಸ್ಥಿತರಿದ್ದರು.
Tags
News