ಸಕ್ರೇಬೈಲು ಬಳಿ ಸ್ವಚ್ಛತಾ ಕಾರ್ಯಕ್ಕೆ ಗೌರಿಗದ್ದೆಯ ಶ್ರೀ ಅವಧೂತ ವಿನಯ
ಗುರೂಜಿಗಳಿಂದ ಚಾಲನೆ
ಸ್ವಚ್ಛ ಪರಿಸರದಿಂದ ಆರೋಗ್ಯವಂತ ಸಮಾಜ ನಿರ್ಮಾಣ
ಶಿವಮೊಗ್ಗ : ಸ್ವಚ್ಛ ಪರಿಸರದಿಂದ ಆರೋಗ್ಯಪೂರ್ಣ ಹಾಗೂ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಕೊಪ್ಪ ತಾಲೂಕು ಗೌರಿಗದ್ದೆಯ ಶ್ರೀ ಅವಧೂತ ವಿನಯ ಗುರೂಜಿ ಹೇಳಿದರು.
ಕೊಪ್ಪ ತಾಲೂಕು ಗೌರಿಗದ್ದೆ ಮಹಾತ್ಮಾ ಗಾಂದಿ ಸೇವಾ ಟ್ರಸ್‌್ಟ,, ಶಿವಮೊಗ್ಗ ಸರ್ಜಿ ಪೌಂಡೇಷನ್, ರೌಂಡ್ ಟೇಬಲ್ ಇಂಡಿಯಾ, ಓಪನ್ ಮೈಂಡ್‌್ಸ ಸ್ಕೂಲ್, ಜೆಸಿಐ ಮಲ್ನಾಡ್, ಪರೋಪಕಾರಂ, ಆಶ್ರಯ ಬಡಾವಣೆ ವೇದಿಕೆ, ಪರ್ಯ್ವರ್ಣ್ ಶಿವಮೊಗ್ಗ ಗುರುವಾರ ಮುಂಜಾನೆ ಸಕ್ರೇಬೈಲು - ಮಂಡಗದ್ದೆ ಮಾರ್ಗದ 6 ಕಿಲೊ ಮೀಟರ್ ದೂರದ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸರ್ಜಿ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಸುಂದರವಾದ ಪ್ರಕೃತಿಯ ಮಧ್ಯದ ದಾರಿ ಆಚೀಚೆ ಪ್ಲಾಸ್ಟಿಕ್, ಖಾಲಿ ಪೌಚು ಹಾಗೂ ಮದ್ಯದ ಬಾಟಲಿಗಳೇ ರಾರಾಜಿಸಿವೆ. ವಾಹನಗಳಲ್ಲಿ ಬಂದು ರಸ್ತೆಯ ಬದಿ ಕಾರು ಬಾರು, ಮೋಜು ಮಸ್ತಿ ಸಲ್ಲದು ಎಂದರು.
ಸ್ವಚ್ಛತಾ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಇಲಾಖೆ ಅದಿಕಾರಿಗಳಿಂದ ಎಲ್ಲ ರೀತಿಯ ಸಹಕಾರವನ್ನು ದೊರೆತಿದೆ. ಅಲ್ಲದೇ ಹಲವು ಸಂಘಟನೆಗಳ ಸಹಕಾರದೊಂದೊಂದಿಗೆ ರಸ್ತೆ ಬದಿಗಳಲ್ಲಿ 500 ಮೀಟರ್‌ಗೊಂದರಂತೆ 8 ತ್ಯಾಜ್ಯದ ಸ್ಟೀಲ್ ತೊಟ್ಟಿಗಳನ್ನು ಭದ್ರವಾಗಿ ಅಳವಡಿಸಲಾಗಿದೆ. ಇದರಲ್ಲೇ ತ್ಯಾಜ್ಯವನ್ನು ಹಾಕಬೇಕು. ವಾರಕ್ಕೊಮ್ಮೆ ಕಸದ ಸೂಕ್ತ ವಿಲೆವಾರಿಗೂ ವ್ಯವಸ್ಥೆ ಮಾಡಲಾಗಿದೆ ಎಂದರು.
ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕೊಳೆಯಬೇಕೆಂದರೆ ಸುಮಾರು 200 ವರ್ಷಗಳ ಕಾಲ ಬೇಕಾಗುತ್ತದೆ. ಹಾಗೆಯೇ ಬಿಟ್ಟರೆ ಪ್ಲಾಸ್ಟಿಕ್ ಬಿದ್ದ ಜಾಗದಲ್ಲಿ ಯಾವುದೇ ಬೆಳೆ, ಸಸ್ಯ ಕೂಡ ಮೇಲೇಳುವುದಿಲ್ಲ. ಅದರಲ್ಲೂ ಹೆದ್ದಾರಿ ಬದಿಯ ಇಕ್ಕೆಲಗಳಲ್ಲಿ ಬೇಕಾಬಿಟ್ಟಿ ಬಿಸಾಡುವುದರಿಂದ ಪರಿಸರದ ಸೌಂದರ್ಯವೂ ಹಾಳಾಗುತ್ತದೆ. ಹಾಗಾಗಿ ಪ್ರವಾಸಿಗರೂ ಸೇರಿದಂತೆ ಎಲ್ಲರೂ ಪರಿಸರ ರಕ್ಷಣೆಯ ಅರಿವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಪರ ಜಿಲ್ಲಾದಿಕಾರಿ ಡಾ. ನಾಗೇಂದ್ರ ಹೊನ್ನಳ್ಳಿ, ರೌಂಡ್ ಟೇಬಲ್ ಇಂಡಿಯಾ ಚೇರ್ಮನ್ ಕೌಶಿಕ್ ಡಿ.ಎನ್, ಈಶ್ವರ್ ಸರ್ಜಿ, ಸೂಡಾ ಆಯಕ್ತರಾದ ಕೊಟ್ರೇಶ್, ಓಪನ್ ಮೈಂಡ್‌್ಸ ಸ್ಕೂಲ್ ಮುಖ್ಯಸ್ಥರಾದ ಕೆ. ಕಿರಣ್ ಕುಮಾರ್, ಜೆಸಿಐನ ಪ್ರದೀಪ್, ಪರೋಪಕಾರಂನ ಶ್ರೀಧರ್, ಆಶ್ರಯ ಬಡಾವಣೆ ವೇದಿಕೆ ಪುರುಷೋತ್ತಮ್, ಪರ್ಯ್ವರಣ್‌ನ ತ್ಯಾಗರಾಜು, ರಾಘವೇಂದ್ರ ಹೆಬ್ಬಾರ್, ಅರಣ್ಯ ಮತ್ತು ವನ್ಯಜೀವಿ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವಾರು ಸಂಘಟನೆಗಳ 350 ಕ್ಕೂ ಹೆಚ್ಚು ಪರಿಸರ ಪ್ರೇಮಿಗಳು ಹಾಗೂ ಗುರೂಜಿ ಅವರ ನೂರಾರು ಭಕ್ತರು ತ್ಯಾಜ್ಯ ಸಂಗ್ರಹಣೆಯಲ್ಲಿ ಭಾಗವಹಿಸಿದ್ದರು.
ಮೂರು ಲೋಡಿಂಗ್ ಗಿಂತ ಹೆಚ್ಚು ತ್ಯಾಜ್ಯ
ಮುಂಜಾನೆ 6 ಗಂಟೆಯಿಂದ ಸತತ ನಾಲ್ಕೈದು ತಾಸು ರಸ್ತೆ ಬದಿ ಹಾಗೂ ಕಾಡೊಳಗಿನ ಘನ ತ್ಯಾಜ್ಯವನ್ನು ಚೀಲಗಳಲ್ಲಿ ಗಾಜಿನ ಬಾಟಲಿ, ಮರು ಸಂಸ್ಕರಣೆ ಆಗುವ ಪ್ಲಾಸ್ಟಿಕ್ ಹಾಗೂ ಮರು ಸಂಸ್ಕರಣೆ ಆಗದ ಪ್ಲಾಸ್ಟಿಕ್ ಅನ್ನು ಪ್ರತ್ಯೇಕವಾಗಿ ವಿಂಗಡಿಸಿ ಮೂರು ಲಾರಿ ಲೋಡ್‌ಗಳಿಗಿಂತಲೂ ಹೆಚ್ಚು ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.